Designed & Built by NexGenCodify
✦ Progressive Agri-Entrepreneur & Agricultural Innovator

Dr. Thimmegowda M.K. (Santhosh)

Farmer • Mushroom Cultivation Trainer • Trainer at RUDSETI, ODP, Agriculture University, and Private Institutions
Roots & Origin Born 1984 in Maradipura Village, Honakere Hobli, Nagamangala Taluk, Mandya District, Karnataka.

Over 27 years of deep, hands-on immersion in agriculture, pioneering scientific transformations across Karnataka. A master mushroom farmer, innovator in organic bio-substrates, and trainer at National Academy of RUDSETI, Dr. Thimmegowda has served as esteemed faculty across Agricultural Universities and ODP Institution, mentoring thousands of educated unemployed youth, women, farmers, and retired officers in mushroom cultivation and scientific organic farming.

27+
Years in Agriculture
1000+
Students Trained
100%
Scientific & Chemical-Free
Dr. Thimmegowda (Santhosh) - Distinguished Agricultural Scientist

Dr. Thimmegowda M.K. (Santhosh)

27 Years in Scientific Farming • RUDSETI, ODP & Agri Univ Trainer

ಭಾಗ ೨ • ಪ್ರಶಸ್ತಿಗಳು ಮತ್ತು ಗೌರವಗಳು

ಇವರ ಕೃಷಿ ಚಟುವಟಿಕೆಯನ್ನು ಗುರುತಿಸಿ ಲಭಿಸಿರುವ ಪ್ರಶಸ್ತಿಗಳ ವಿವರ

ಕೃಷಿ ನಾವೀನ್ಯತೆ ಹಾಗೂ ೨೭ ವರ್ಷಗಳ ಸಾರ್ಥಕ ಸಾಧನೆಗೆ ಸಂದ ಪ್ರತಿಷ್ಠಿತ ಪುರಸ್ಕಾರಗಳು

✦
ಸನ್ಮಾನ ಹಾಗೂ ಪ್ರಶಸ್ತಿ ಕ್ಷಣಗಳು
01 / 09
Doctorate Degree Conferment Ceremony
🎓 ಡಾಕ್ಟರೇಟ್ ಪದವಿ ಪುರಸ್ಕಾರ ಸಮಾರಂಭ — ಜರ್ಮನ್ ಯುನಿವರ್ಸಿಟಿ & ವಿಶ್ವಸಂಸ್ಥೆ ಸಂಸ್ಥೆ
UAS Bangalore Krishi Mela State Honor
🌾 ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು — ರಾಜ್ಯಮಟ್ಟದ ಕೃಷಿ ಮೇಳ ಸನ್ಮಾನ
Udyami Vokkaliga Award from Swamiji
🎖️ ರಾಜ್ಯಮಟ್ಟದ ಉದ್ಯಮಿ ಒಕ್ಕಲಿಗ ಪ್ರಶಸ್ತಿ — ಪೂಜ್ಯ ಸ್ವಾಮೀಜಿ ಅವರಿಂದ ಪ್ರದಾನ
State Level Vijaya Raita Award by Vijayavani Daily
🏆 ರಾಜ್ಯಮಟ್ಟದ ವಿಜಯ ರೈತ ಪ್ರಶಸ್ತಿ — ವಿಜಯವಾಣಿ ಪತ್ರಿಕೆ
Canara Bank RSETI Hassan Felicitation
👑 ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ಸಂಸ್ಥೆ (RSETI) ಹಾಸನ — ಸನ್ಮಾನ
Canara Bank Centenary CBRSETI Felicitation
🏅 ಕೆನರಾ ಬ್ಯಾಂಕ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ (CBRSETI) ಸನ್ಮಾನ
Bhusiri Development Foundation Felicitation
🌿 ಭೂಸಿರಿ ಡೆವಲಪ್‌ಮೆಂಟ್ ಫೌಂಡೇಶನ್ — ಕೃಷಿ ಪುರಸ್ಕಾರ ಸನ್ಮಾನ
FC EXPO Udyami Vokkaliga with Farmers Team
🌟 ಎಫ್.ಸಿ. ಕೃಷಿ ತಂತ್ರಜ್ಞಾನ ವಲಯ — ರೈತ ಮುಖಂಡರೊಂದಿಗೆ ಗೌರವ
Paramapoojya Sri Sri Sri Nirmalanandanatha Mahaswamiji Stage Felicitation
🏵️ ಪೂಜ್ಯ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಂದ ವೇದಿಕೆ ಸನ್ಮಾನ ಹಾಗೂ ಹಣ್ಣು-ತರಕಾರಿ ಬುಟ್ಟಿ ಸಮರ್ಪಣೆ
⏱️ ಚಿತ್ರಗಳು ಪ್ರತಿ ೬ ಸೆಕೆಂಡಿಗೆ ಸ್ವಯಂಚಾಲಿತವಾಗಿ ಬದಲಾಗುತ್ತವೆ
🌾

ಸಾವಿರಾರು ರೈತರಿಗೆ ಸ್ಪೂರ್ತಿಯ ಚಿಲುಮೆ

ತಮ್ಮ ೨೭ ವರ್ಷಗಳ ಸತತ ಕೃಷಿ ನಾವೀನ್ಯತೆ ಹಾಗೂ ನಿಸ್ವಾರ್ಥ ತರಬೇತಿಯ ಮೂಲಕ ಡಾ. ತಿಮ್ಮೇಗೌಡ ಎಂ.ಕೆ. (ಸಂತೋಷ್) ಅವರು ಸಮಸ್ತ ಕೃಷಿ ಸಮುದಾಯಕ್ಕೆ ಆದರ್ಶಪ್ರಾಯರಾಗಿದ್ದಾರೆ.

01

ಡಾಕ್ಟರೇಟ್ ಪದವಿ ಪುರಸ್ಕಾರ

ಜರ್ಮನ್ ಯುನಿವರ್ಸಿಟಿ

ಕೃಷಿ ವಿಜ್ಞಾನ ಮತ್ತು ಸಾವಯವ ನಾವೀನ್ಯತೆಯಲ್ಲಿನ ಅಪ್ರತಿಮ ಸೇವೆಗಾಗಿ ಗೌರವ ಡಾಕ್ಟರೇಟ್ ಪದವಿ ಪುರಸ್ಕಾರ.

02

ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ

GKVK ಬೆಂಗಳೂರು

ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಬೆಂಗಳೂರು ವತಿಯಿಂದ ಪ್ರದಾನ ಮಾಡಲಾದ ಪ್ರಶಸ್ತಿ.

03

ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ

ಮಂಡ್ಯ ಜಿಲ್ಲೆ

ಮಂಡ್ಯ ಜಿಲ್ಲಾ ಮಟ್ಟದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿದ ಮಹೋನ್ನತ ಕೊಡುಗೆಗಾಗಿ ಶ್ರೇಷ್ಠ ಕೃಷಿಕ ಗೌರವ.

04

ಜಿಲ್ಲಾ ಮಟ್ಟದ ಸಾವಯವ ಕೃಷಿಕ ಪ್ರಶಸ್ತಿ

ಮೈಸೂರು ಜಿಲ್ಲೆ

ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಮತ್ತು ಸಾವಯವ ತಂತ್ರಜ್ಞಾನಕ್ಕಾಗಿ ಲಭಿಸಿದ ಪುರಸ್ಕಾರ.

05

ರಾಜ್ಯಮಟ್ಟದ ಉದ್ಯಮಿ ಒಕ್ಕಲಿಗ ಪ್ರಶಸ್ತಿ

ಬೆಂಗಳೂರು

ಕರ್ನಾಟಕ ರಾಜ್ಯಮಟ್ಟದ ಪ್ರತಿಷ್ಠಿತ ಸಮಾರಂಭದಲ್ಲಿ ಪ್ರದಾನ ಮಾಡಲಾದ ಉದ್ಯಮಿ ಒಕ್ಕಲಿಗ ಗೌರವ.

06

ರಾಜ್ಯಮಟ್ಟದ ವಿಜಯ ರೈತ ಪ್ರಶಸ್ತಿ

ವಿಜಯವಾಣಿ ಪತ್ರಿಕೆ, ಮೈಸೂರು

ಪ್ರಮುಖ ದಿನಪತ್ರಿಕೆ 'ವಿಜಯವಾಣಿ' ವತಿಯಿಂದ ರಾಜ್ಯಮಟ್ಟದಲ್ಲಿ ನೀಡಲಾದ ವಿಜಯ ರೈತ ಪುರಸ್ಕಾರ.

07

ರಾಜ್ಯಮಟ್ಟದ ಸಾವಯವ ಕೃಷಿಕ ಪ್ರಶಸ್ತಿ

ಬೆಂಗಳೂರು

ಶೂನ್ಯ ರಾಸಾಯನಿಕ ಸಾವಯವ ಕೃಷಿ ಮಾದರಿಗಾಗಿ ರಾಜ್ಯಮಟ್ಟದ ಗೌರವ ಪ್ರಶಸ್ತಿ.

08

ಎಕ್ಸಲೆಂಟ್ ಅವಾರ್ಡ್ (Excellence Award)

ನ್ಯಾಷನಲ್ ರೋಟರಿ ಕ್ಲಬ್

ನ್ಯಾಷನಲ್ ರೋಟರಿ ಕ್ಲಬ್ ವತಿಯಿಂದ ಗ್ರಾಮೀಣ ಹಾಗೂ ಕೃಷಿ ಸಮುದಾಯ ಸೇವೆಗಾಗಿ ಪ್ರದಾನ ಮಾಡಲಾದ ಉತ್ಕೃಷ್ಟ ಪ್ರಶಸ್ತಿ.

09

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಮಂಡ್ಯ

ಐತಿಹಾಸಿಕ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ವಿಶೇಷ ಗೌರವ ಸನ್ಮಾನ.

10

ಸೂಪರ್ ದಂಪತಿ ಅವಾರ್ಡ್

ಕಲರ್ ಸೂಪರ್ ಟಿವಿ ವಾಹಿನಿ

ಕಲರ್ ಸೂಪರ್ ದೂರದರ್ಶನ ವಾಹಿನಿಯ ವತಿಯಿಂದ ಪ್ರದಾನ ಮಾಡಲಾದ ಗೌರವ ಪುರಸ್ಕಾರ.

11

ಮಾಡ್ರನ್ ರೈತ ಪ್ರಶಸ್ತಿ

Modern Farmer Award

ಆಧುನಿಕ ತಂತ್ರಜ್ಞಾನ, ಅಣಬೆ ಕೃಷಿ ಮತ್ತು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿದ್ದಕ್ಕಾಗಿ ಸನ್ಮಾನ.

12

ಯುವ ರೈತರತ್ನ ಪ್ರಶಸ್ತಿ

Yuva Raita Ratna

ಯುವ ಪೀಳಿಗೆಗೆ ಕೃಷಿಯಲ್ಲಿ ದಾರಿದೀಪವಾಗಿ ನಿಂತಿದ್ದಕ್ಕಾಗಿ ಪ್ರದಾನ ಮಾಡಲಾದ ಯುವ ರೈತರತ್ನ ಪ್ರಶಸ್ತಿ.

13

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ವಜ್ರ ಮಹೋತ್ಸವ ಸನ್ಮಾನ

GKVK, UAS Bangalore

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿನ ಐತಿಹಾಸಿಕ ವಜ್ರ ಮಹೋತ್ಸವ ಸಮಾರಂಭದಲ್ಲಿ ಲಭಿಸಿದ ಕೃಷಿ ಸನ್ಮಾನ.

14

ಕಾಯಕ ಶ್ರೀ ಪ್ರಶಸ್ತಿ

ಕಲಾಮಂದಿರ ಮಂಡ್ಯ • ಹರ್ಷ ಸಮಾಜ ಸೇವಾ ಫೌಂಡೇಶನ್

ಸಮಾಜ ಸೇವೆ ಹಾಗೂ ಕೃಷಿ ಕ್ಷೇತ್ರದಲ್ಲಿನ ನಿಸ್ವಾರ್ಥ ಶ್ರಮ ಮತ್ತು ರೈತ ಸಮುದಾಯದ ಏಳಿಗೆಗಾಗಿ ಮಂಡ್ಯದ ಕಲಾಮಂದಿರದಲ್ಲಿ ಪ್ರದಾನ ಮಾಡಲಾದ ಕಾಯಕ ಶ್ರೀ ಪ್ರಶಸ್ತಿ.

15

ಕರುನಾಡ ಚೇತನ ಪ್ರಶಸ್ತಿ

ಸ್ಪೂರ್ತಿ ಕಲಾ ಟ್ರಸ್ಟ್ ಬೆಂಗಳೂರು

ಕರ್ನಾಟಕದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆ ಹಾಗೂ ರೈತರ ಸಬಲೀಕರಣಕ್ಕಾಗಿ ಸಂದ ಗೌರವ.

🎖️
ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ಗೌರವ ಸನ್ಮಾನ

ರಾಜ್ಯಾದ್ಯಂತ ನೂರಾರು ರೈತ ಸಂಘಟನೆಗಳು, ಶೈಕ್ಷಣಿಕ ಪೀಠಗಳು ಹಾಗೂ ಸಾಮಾಜಿಕ ಟ್ರಸ್ಟ್‌ಗಳು ಡಾ. ತಿಮ್ಮೇಗೌಡರ ಕೃಷಿ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಸನ್ಮಾನಿಸಿವೆ.

✨ ಉದ್ಯಮಿ ಒಕ್ಕಲಿಗ 🌾 ರಾಜ್ಯ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ 🌱 ರಾಜ್ಯಮಟ್ಟದ ಸಾವಯವ ರೈತ ಪ್ರಶಸ್ತಿ 👑 ಮಂಡ್ಯ ಜಿಲ್ಲೆಯ ರೈತರ ರಾಯಭಾರಿ
ಭಾಗ ೩ • ಶೈಕ್ಷಣಿಕ ಸೇವೆ ಮತ್ತು ಬೋಧನೆ

ಅವರ ಬೋಧನಾ ಸಾಧನೆಗಳು ಮತ್ತು ಸಬಲೀಕರಣ

ಪ್ರಯೋಗಾಲಯದ ವಿಜ್ಞಾನವನ್ನು ಯುವಕರು, ಮಹಿಳೆಯರು ಮತ್ತು ರೈತರಿಗೆ ತಲುಪಿಸಿ, ಸ್ವಾವಲಂಬಿ ಬದುಕಿಗೆ ದಾರಿ ತೋರಿದ ಶ್ರೇಷ್ಠ ಗುರು.

✦
🍄 ಅಣಬೆ ಮತ್ತು ವೈಜ್ಞಾನಿಕ ಸಮಗ್ರ ಸಾವಯವ ಕೃಷಿ ತಜ್ಞರು ಹಾಗೂ ಶ್ರೇಷ್ಠ ಮಾರ್ಗದರ್ಶಕರು

ರಾಜ್ಯಾದ್ಯಂತ ೧೦೦೦+ ನಿರುದ್ಯೋಗಿ ಯುವಕ-ಯುವತಿಯರು, ರೈತರು & ಅಧಿಕಾರಿಗಳಿಗೆ ಪ್ರಾಯೋಗಿಕ ತರಬೇತಿ

ಇವರು ೯ ವರ್ಷಗಳಿಂದ ಅಣಬೆ ಬೇಸಾಯ ಮಾಡುವುದರ ಜೊತೆಗೆ, ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟ್ (RUDSETI) ನಲ್ಲಿ ಮಾನ್ಯತೆ ಪಡೆದು, ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಹಾಗೂ ಓ.ಡಿ.ಪಿ. (ODP) ಸಂಸ್ಥೆಯಲ್ಲಿ ರಾಜ್ಯಾದ್ಯಂತ ಸಾವಿರಾರು ವಿದ್ಯಾವಂತ ನಿರುದ್ಯೋಗಿ ಯುವಕ ಯುವತಿಯರಿಗೆ, ರೈತರಿಗೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಅಣಬೆ ಮತ್ತು ವೈಜ್ಞಾನಿಕ ಸಮಗ್ರ ಸಾವಯವ ಕೃಷಿ ಕುರಿತು ಸಮಗ್ರ ಮಾರ್ಗದರ್ಶನ ನೀಡಿದ್ದಾರೆ.

ಉತ್ಪನ್ನಗಳ ಮೌಲ್ಯವರ್ಧನೆ (Value Addition) ಹಾಗೂ ನೇರ ಮಾರುಕಟ್ಟೆ (Direct Marketing) ಬಗ್ಗೆ ಸ್ವತಃ ಪ್ರಾಯೋಗಿಕ ತರಬೇತಿಯನ್ನು ನೀಡಿ ಅವರ ಬಾಳಿಗೆ ದಾರಿದೀಪವಾಗಿದ್ದಾರೆ. ಕೃಷಿ ಮೂಲಗಳಿಂದ ಬರುವ ತ್ಯಾಜ್ಯ ಕಚ್ಚಾ ವಸ್ತುಗಳ ಸಹಾಯದಿಂದ ಕಡಿಮೆ ಜಾಗ, ಕಡಿಮೆ ನೀರು, ಕಡಿಮೆ ಸಮಯದಲ್ಲಿ ಹೆಚ್ಚು ಇಳುವರಿಯನ್ನು ತೆಗೆದು ನೇರವಾಗಿ ಮಾರುಕಟ್ಟೆ ಮಾಡಿ ಅಧಿಕ ಲಾಭವನ್ನು ಗಳಿಸುವ ರಹಸ್ಯವನ್ನು ಕಲಿಸಿಕೊಡುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವ ಬೋಧನೆ ಮತ್ತು ಮಾರ್ಗದರ್ಶನದಲ್ಲಿ ಪ್ರಾಯೋಗಿಕವಾಗಿ ಅವರಿಂದಲೇ ಎಲ್ಲಾ ಬೇಸಾಯ ಕಾರ್ಯ ಚಟುವಟಿಕೆಗಳನ್ನು ಸರಳವಾಗಿ ಮಾಡಿಸುವುದು ಇವರ ಬೋಧನೆಯ ಪ್ರಮುಖ ವೈಶಿಷ್ಟ್ಯ. ಸೈದ್ಧಾಂತಿಕ (Theory) ಬೋಧನೆಯೊಂದಿಗೆ ಅಪಾರ ಪ್ರಮಾಣದ ಪ್ರಾಕ್ಟಿಕಲ್ (Practical Best Classes) ತರಗತಿಗಳನ್ನು ನಡೆಸಿ, ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗದ ಆತ್ಮವಿಶ್ವಾಸ ತುಂಬಿದ್ದಾರೆ.

1000+
ತರಬೇತಿ ಪಡೆದ ವಿದ್ಯಾರ್ಥಿಗಳು ಯುವಕರು, ರೈತರು, ನಿವೃತ್ತ ಅಧಿಕಾರಿಗಳು
9+ ವರ್ಷ
ಅಣಬೆ ಕೃಷಿ ಪರಿಣತಿ ವೈಜ್ಞಾನಿಕ ಸಾವಯವ ಸಂಶೋಧನೆ
100%
ಪ್ರಾಯೋಗಿಕ ತರಬೇತಿ ಪ್ರಾಕ್ಟಿಕಲ್ ಬೆಸ್ಟ್ ಕ್ಲಾಸ್‌ಗಳು
🔬

ಪ್ರಾಕ್ಟಿಕಲ್ ಬೆಸ್ಟ್ ಕ್ಲಾಸ್ & ಸಿದ್ಧಾಂತ

ಥಿಯರಿ ಜೊತೆಗೆ ವಿದ್ಯಾರ್ಥಿಗಳ ಕೈಯಿಂದಲೇ ಬೇಸಾಯದ ಪ್ರತಿಯೊಂದು ಹಂತವನ್ನು ಮಾಡಿಸಿ ಪರಿಪೂರ್ಣ ಕೌಶಲ್ಯ ನೀಡಲಾಗುತ್ತದೆ.

♻️

ಕೃಷಿ ತ್ಯಾಜ್ಯದಿಂದ ಅಧಿಕ ಲಾಭ

ಕೃಷಿ ತ್ಯಾಜ್ಯ ಕಚ್ಚಾ ವಸ್ತುಗಳ ಬಳಕೆಯಿಂದ ಕಡಿಮೆ ಜಾಗ, ಕಡಿಮೆ ನೀರು, ಕಡಿಮೆ ಸಮಯದಲ್ಲಿ ಗರಿಷ್ಠ ಇಳುವರಿ ಮತ್ತು ಲಾಭ.

🛖

ಕಡಿಮೆ ವೆಚ್ಚದ ಕೊಠಡಿ ನಿರ್ಮಾಣ

ಸರಳ ಹಾಗೂ ಸಾಂಪ್ರದಾಯಿಕವಾಗಿ ಅಣಬೆ ಬೇಸಾಯಕ್ಕೆ ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಳ್ಳಬಹುದಾದ ಕೊಠಡಿಗಳ ತಂತ್ರಜ್ಞಾನ.

📦

ಮೌಲ್ಯವರ್ಧನೆ & ನೇರ ಮಾರುಕಟ್ಟೆ

ಅಣಬೆ ಉತ್ಪನ್ನಗಳ ಪ್ಯಾಕಿಂಗ್, ಮೌಲ್ಯವರ್ಧನೆ ಮತ್ತು ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ಮಾರಿ ಅಧಿಕ ಲಾಭ ಗಳಿಸುವುದು.

ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಬೋಧನೆ
01 / 09
Training on Value Added Mushroom Products at RSETI Hinkal Mysuru
🍄 ಮೈಸೂರಿನ ಹಿಂಕಲ್ ರುಡ್‌ಸೆಟ್‌ (RSETI) ನಲ್ಲಿ ಮೌಲ್ಯವರ್ಧಿತ ಅಣಬೆ ಉತ್ಪನ್ನಗಳು ಮತ್ತು ನೇರ ಮಾರುಕಟ್ಟೆ ಪ್ರಾತ್ಯಕ್ಷಿಕೆ
Classroom Blackboard Teaching with Dr. APJ Abdul Kalam Motto
📚 ತರಗತಿಯಲ್ಲಿ ಕಪ್ಪುಹಲಗೆಯ ಮೂಲಕ ಅಣಬೆ ಬೇಸಾಯದ ವೈಜ್ಞಾನಿಕ ತತ್ತ್ವಗಳ ಬೋಧನೆ
Large Group Practical Workshop on Straw Substrate Preparation
🌾 ವಿದ್ಯಾರ್ಥಿಗಳಿಗೆ ಹುಲ್ಲು ಹಾಗೂ ಕೃಷಿ ತ್ಯಾಜ್ಯದಿಂದ ಅಣಬೆ ಬೆಡ್ ತಯಾರಿಸುವ ಸಾಮೂಹಿಕ ಪ್ರಾಯೋಗಿಕ ಕಾರ್ಯಾಗಾರ
Hands-on Table Session Demonstrating Spawn Inoculation with Students
🔬 ಮೇಜಿನ ಮೇಲೆ ಅಣಬೆ ಬೀಜ ಬಿತ್ತನೆ ಹಾಗೂ ಕವಕಜಾಲ ಸಂವರ್ಧನೆಯ ನೇರ ತರಬೇತಿ
Outdoor Practical Demonstration of Straw Beds Management
🌱 ಹೊರಾಂಗಣದಲ್ಲಿ ಸಿದ್ಧಪಡಿಸಿದ ಅಣಬೆ ಬೆಡ್‌ಗಳ ನಿರ್ವಹಣೆ ಹಾಗೂ ನೀರುಣಿಸುವ ಪ್ರಾತ್ಯಕ್ಷಿಕೆ
Interactive Classroom Teaching and Guidance to Students
🎓 ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವ ಬೋಧನೆ ಮತ್ತು ಸೈದ್ಧಾಂತಿಕ-ಪ್ರಾಯೋಗಿಕ ಸಂವಾದ
Hands-on Outdoor Practical Workshop on Agri Waste Substrate
♻️ ಕೃಷಿ ತ್ಯಾಜ್ಯ ಕಚ್ಚಾ ವಸ್ತುಗಳಿಂದ ಅಣಬೆ ಬೆಡ್ ತಯಾರಿಸುವ ನೇರ ಪ್ರಾಕ್ಟಿಕಲ್ ತರಬೇತಿ
Training Batch of 30+ Students, Youth, Farmers and Officers
👥 ೩೦ಕ್ಕೂ ಹೆಚ್ಚು ವಿದ್ಯಾವಂತ ಯುವಕರು, ರೈತರು ಹಾಗೂ ಅಧಿಕಾರಿಗಳೊಂದಿಗೆ ಯಶಸ್ವಿ ತರಬೇತಿ ಸಮಾರೋಪ
ಗುರುವಂದನಾ ಕಾರ್ಯಕ್ರಮ — ರುಡ್‌ಸೆಟ್ ವಿದ್ಯಾರ್ಥಿನಿಯರಿಂದ ಡಾ. ಸಂತೋಷ್ ಅವರಿಗೆ ಸನ್ಮಾನ
💐 ಗುರುವಂದನಾ ಕಾರ್ಯಕ್ರಮ — ರುಡ್‌ಸೆಟ್‌ ವಿದ್ಯಾರ್ಥಿನಿಯರಿಂದ ಡಾ. ಸಂತೋಷ್ ಅವರಿಗೆ ಪ್ರೀತಿಯ ಪುಷ್ಪಗುಚ್ಛ ಸಮರ್ಪಣೆ & ಗೌರವ ಸನ್ಮಾನ
⏱️ ಚಿತ್ರಗಳು ಪ್ರತಿ ೬ ಸೆಕೆಂಡಿಗೆ ಸ್ವಯಂಚಾಲಿತವಾಗಿ ಬದಲಾಗುತ್ತವೆ
ಭಾಗ ೪ • ಸತ್ಯ ಜೀವನ ಪಯಣ, ಅಣಬೆ ಕೃಷಿ ಕ್ರಾಂತಿ & ಆತ್ಮಕಥನ

ಸಂತೋಷ್ ತಿಮ್ಮೇಗೌಡ ಅವರ ಸಂಪೂರ್ಣ ಜೀವನ ಕಥೆ & ಅಣಬೆ ಕ್ರಾಂತಿ

ಮಂಡ್ಯ ಜಿಲ್ಲೆ ನಾಗಮಂಗಲದ ಪುಟ್ಟ ಗ್ರಾಮ ಮರಡಿಪುರದಿಂದ ಪ್ರಾರಂಭವಾಗಿ, ಸಂಕಷ್ಟಗಳನ್ನು ಮೆಟ್ಟಿ ನಿಂತು, ವೈಜ್ಞಾನಿಕ ಅಣಬೆ ಕೃಷಿ, ಜೀರೋ-ವೇಸ್ಟ್ ಕೃಷಿ ಚಕ್ರ ಮತ್ತು ಸಾವಿರಾರು ರೈತರಿಗೆ ಬದುಕು ಕಟ್ಟಿಕೊಟ್ಟ ಪ್ರೇರಣಾದಾಯಕ ಸತ್ಯ ಕಥಾನಕ.

✦
ಅಧ್ಯಾಯ ೧ • ಮರಡಿಪುರದಲ್ಲಿ ಜನನ, ಕೃಷಿ ಹಿನ್ನೆಲೆ & ಬಾಲ್ಯದ ಶಿಕ್ಷಣ (1984)

ಹುಟ್ಟು ಮತ್ತು ಬಾಲ್ಯದ ಶೈಕ್ಷಣಿಕ ಹೆಜ್ಜೆಗಳು: ಮರಡಿಪುರ, ಬೆಳ್ಳೂರು ಬಿಜಿಎಸ್

ಸಂತೋಷ್ ತಿಮ್ಮೇಗೌಡ ಎಂಬ ಹೆಸರಿನವನಾದ ನಾನು, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು, ಹೊಣಕೆರೆ ಹೋಬಳಿಯ ಮರಡಿಪುರ ಎಂಬ ಚಿಕ್ಕ ಗ್ರಾಮದಲ್ಲಿ ಶ್ರೀಮತಿ ಬೋರಮ್ಮ ಮತ್ತು ಶ್ರೀ ಕುಚೇಲೇ ಗೌಡ ಎಂಬ ದಂಪತಿಗಳ ಪುತ್ರನಾಗಿ 15/05/1984 ರಲ್ಲಿ ಜನಿಸಿದೆ.

ಬ್ರಹ್ಮದೇವರ ಹಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿ, ನಂತರ ಉನ್ನತ ಶಿಕ್ಷಣಕ್ಕಾಗಿ ನಾಗಮಂಗಲ ತಾಲೂಕು ಬೆಳ್ಳೂರಿನ ಬಿಜಿಎಸ್ (BGS) ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದಿರುತ್ತೇನೆ.

"ಮಣ್ಣಿನ ಮಗನಾಗಿ ಜನಿಸಿದ ನನಗೆ ಹಳ್ಳಿಯ ಕೃಷಿ ಪರಿಸರವೇ ಬಾಲ್ಯದ ಮೊದಲ ಮತ್ತು ನಿಜವಾದ ಪಾಠಶಾಲೆಯಾಗಿತ್ತು."
ಅಧ್ಯಾಯ ೨ • ತಾಯಿಯ ಅಕಾಲಿಕ ಅಗಲಿಕೆ, ಕುಟುಂಬದ ಸಂಕಷ್ಟ & ಸಾಂಪ್ರದಾಯಿಕ ಕೃಷಿಯ ದಿನಗಳು

ಕಣ್ಣೀರಿನ ಸಂಕಷ್ಟ, ಶಿಕ್ಷಣ ಮೊಟಕು & ತಂದೆಯೊಂದಿಗೆ ಸಾಂಪ್ರದಾಯಿಕ ಬೇಸಾಯ

ನಾವು ಮೂಲತಃ ಬಡ ರೈತ ಕುಟುಂಬ. ಶಿಕ್ಷಣ ಪಡೆಯುತ್ತಿದ್ದ ಇದೇ ಸಂದರ್ಭದಲ್ಲಿ ನಮ್ಮ ತಾಯಿ ಶ್ರೀಮತಿ ಬೋರಮ್ಮನವರು ಕೃಷಿ ಕಾಯಕದಲ್ಲಿ ತೊಡಗಿದ್ದ ಸಂದರ್ಭ ಹಾವು ಕಚ್ಚಿ ಸಾವನ್ನಪ್ಪುತ್ತಾರೆ... ನನಗೆ ಮೂರು ಜನ ಅಕ್ಕಂದಿರು ಮತ್ತು ಒಬ್ಬಳು ತಂಗಿ ಇದ್ದರು. ಈ ತಾಯಿಯ ಅಕಾಲಿಕ ಅಗಲಿಕೆ ಹಾಗೂ ಕುಟುಂಬದ ಅನಿವಾರ್ಯ ಪರಿಸ್ಥಿತಿಯಿಂದ ನನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಬೇಕಾಯಿತು.

ನಾನು ಅಂದೇ ಯೋಚಿಸಿದೆ—ನನಗಿರೋದು ಒಂದೇ ದಾರಿ, ಅಪ್ಪ ಹಾಕಿದ ಆಲದ ಮರದಂತೆ ನಮ್ಮ ತಂದೆಗೆ ಎರಡು ಎಕರೆ ಪಿತ್ರಾರ್ಜಿತ ಆಸ್ತಿ ಒಂದು ಕೊಳವೆ ಬಾವಿ ಇತ್ತು. ಅದರಲ್ಲಿ ನಮ್ಮ ತಂದೆ ಜೊತೆ ಸೇರಿ ಕೃಷಿ ಚಟುವಟಿಕೆಯಲ್ಲಿ ತಂದೆಯ ಮಾರ್ಗದರ್ಶನ ಪಡೆದು ಅವರ ಅನುಸರಿಸಿದ್ದ ಸಾಂಪ್ರದಾಯಿಕ ಕೃಷಿಯನ್ನು ನಾನು ಸಹ ಐದು ವರ್ಷಗಳ ಕಾಲ ತೊಡಗಿದೆ. ಅದರಲ್ಲಿ ಊಟಕ್ಕೆ ತೊಂದರೆ ಇಲ್ಲದಿದ್ದರೂ, ಹಣಕಾಸಿಗೆ ತುಂಬಾ ಬಡತನ ನಮ್ಮನ್ನು ಕಾಡತೊಡಗಿತು.

"ತಾಯಿಯ ನೆನಪು ಮತ್ತು ಕುಟುಂಬದ ಜವಾಬ್ದಾರಿ ನನ್ನನ್ನು ಎದೆಗುಂದಿಸದೆ, ಮಣ್ಣಿನಲ್ಲೇ ಬದುಕು ಕಟ್ಟಿಕೊಳ್ಳುವ ದೃಢ ಸಂಕಲ್ಪ ನೀಡಿತು."
ಅಧ್ಯಾಯ ೩ • ವೈಜ್ಞಾನಿಕ ಕ್ರಾಂತಿ — ಸಮಗ್ರ ಮಿಶ್ರ ಬೆಳೆ ಪದ್ಧತಿಯಲ್ಲಿ ೭-೮ ವಿಧದ ಆದಾಯ

ಸಾಂಪ್ರದಾಯಿಕ ಪದ್ಧತಿ ತ್ಯಜಿಸಿ ಮಣ್ಣು-ನೀರು ಪರೀಕ್ಷೆ & ೭-೮ ವಿಧದ ನಿರಂತರ ಆದಾಯ

ಹೀಗೆ ಮುಂದುವರೆದರೆ ನಾನು ಕೃಷಿಯಲ್ಲಿ ಏನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದು, ಅಂದು ನಮ್ಮ ಜಮೀನಿನಲ್ಲಿ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು, ವೈಜ್ಞಾನಿಕವಾಗಿ, ಮಣ್ಣು ನೀರು ಪರೀಕ್ಷೆ ಆಧಾರದ ಮೇಲೆ ಸಾವಯವಕ್ಕೆ ಹೆಚ್ಚು ಹೊತ್ತುಕೊಟ್ಟು ಒಂದೇ ಜಮೀನಿನಲ್ಲಿ ಸಮಗ್ರ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿದೆ.

ಒಂದೇ ಸಮಯ, ಒಂದೇ ಖರ್ಚು, ಒಂದೇ ನೀರು ಖರ್ಚು ಮಾಡಿ, ಏಳರಿಂದ ಎಂಟು ವಿಧವಿಧದ ಆದಾಯ ಬರುವ ಹಾಗೆ ಸೊಪ್ಪು, ತರಕಾರಿ, ತೆಂಗು, ಅಡಿಕೆ, ಬಾಳೆ, ಹಣ್ಣಿನ ಗಿಡಗಳು, ಅರಣ್ಯ ಗಿಡಗಳು, ಔಷಧೀಯ ಗಿಡಗಳನ್ನು ಬೆಳೆದು ಉತ್ತಮ ಇಳುವರಿಯೊಂದಿಗೆ ಅಧಿಕ ಲಾಭವನ್ನು ಸಹ ಗಳಿಸಿದೆ. ಎಲ್ಲಾ ತರಹದ ಸೊಪ್ಪು ತರಕಾರಿಗಳನ್ನು ರಿಲಯನ್ಸ್ ರಿಟೇಲ್ ಲಿಮಿಟೆಡ್ ಕಂಪನಿಗೆ ಮುಂಗಡ ಬುಕಿಂಗ್ ನೊಂದಿಗೆ ನೇರ ಮಾರಾಟ ಮತ್ತು ಆನ್‌ಲೈನ್ ಮೂಲಕ ಎಲ್ಲ ಉತ್ಪನ್ನಗಳನ್ನು ಮಾರಾಟ ಮಾಡಿದ್ದರಿಂದ ನೇರವಾಗಿ ನಮ್ಮ ಖಾತೆಗೆ ಹಣ ಉಳಿತಾಯ ಹೆಚ್ಚಾಗಿತ್ತು, ಇದರಿಂದ ಮಧ್ಯವರ್ತಿಗಳನ್ನು ತಪ್ಪಿಸಿದವು ಮತ್ತು ಮಾರುಕಟ್ಟೆಗೆ ಹೋಗುತ್ತಿದ್ದ ಸಮಯವೂ ಉಳಿಯಿತು. ಇದನ್ನು ಗಮನಿಸಿದ ಸ್ಥಳೀಯ ರೈತರು ಮತ್ತು ಕೃಷಿ ಅಧಿಕಾರಿಗಳು ನಮ್ಮ ಜಮೀನಿಗೆ ಭೇಟಿ ನೀಡಿ ನಾವು ಬೆಳೆದಿರುವ ಮಿಶ್ರ ಸಮಗ್ರ ಕೃಷಿ ಪದ್ಧತಿಯನ್ನು ನೋಡಿ ಅವರು ನನ್ನನ್ನು ಪ್ರೋತ್ಸಾಹಿಸುವುದರ ಜೊತೆಗೆ ಇತರೆ ರೈತರಿಗೂ ತಿಳಿಸಿ ಅವರು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

"ಒಂದೇ ಭೂಮಿ, ಒಂದೇ ಹನಿ ನೀರು, ಏಳೆಂಟು ಆದಾಯ — ಇದುವೇ ಸಮಗ್ರ ಮಿಶ್ರ ಬೇಸಾಯದ ನಿಜವಾದ ಚಮತ್ಕಾರ."
ಅಧ್ಯಾಯ ೪ • ೧೦ ಕುಂಟೆ ಬಂಜರು ಭೂಮಿಯಲ್ಲಿ 'ಮಿನಿ ಕೃಷಿ ವಿಶ್ವವಿದ್ಯಾನಿಲಯ'

ಜೀರೋ-ವೇಸ್ಟ್ ಕಾಂಪೋಸ್ಟ್, ವೈರಲ್ ವಿಡಿಯೋಗಳು & ರಿಲಯನ್ಸ್ ರಿಟೇಲ್ ನೇರ ಮಾರುಕಟ್ಟೆ

ನಮ್ಮ ಒಂದು ಬದಲಾವಣೆ ನೂರಾರು ಜನರಿಗೆ ಮಾರ್ಗದರ್ಶನವಾಗಿದ್ದನ್ನು ಕಂಡು, ಕೃಷಿಯಲ್ಲಿ ಇನ್ನು ಹೆಚ್ಚು ಹೆಚ್ಚು ಬದಲಾವಣೆಯನ್ನು ತರಬೇಕೆಂಬುದು ನನ್ನಲ್ಲಿ ಹಂಬಲ ಹೆಚ್ಚಾಯಿತು. ಇದನ್ನೇ ಮೂಲ ಬಂಡವಾಳವನ್ನಾಗಿ ಇಟ್ಟುಕೊಂಡು, ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಲಹೆ ಮಾರ್ಗದರ್ಶನದಲ್ಲಿ ವೈಜ್ಞಾನಿಕವಾಗಿ ತರಬೇತಿ ಪಡೆದು, ೧೦ ಕುಂಟೆ ಬಂಜರು ಭೂಮಿಯಲ್ಲಿ, ಅಣಬೆ ಕೃಷಿ, ಕೋಳಿ ಸಾಕಾಣಿಕೆ, ಆಡು-ಕುರಿ ಸಾಕಾಣಿಕೆ, ಜೇನು ಸಾಕಾಣಿಕೆ, ಅಜೋಲ ಬೇಸಾಯ, ಹಸು-ಎಮ್ಮೆ ಸಾಕಾಣಿಕೆ ಪ್ರಾರಂಭಿಸಿದೆ.

ಜೊತೆಗೆ ಕೃಷಿ ಮೂಲದಿಂದ ಬರುವ ಎಲ್ಲಾ ತ್ಯಾಜ್ಯಗಳನ್ನು ಪರಿಸರಕ್ಕೆ ಹಾನಿಯಾಗದಂತೆ ನೈಸರ್ಗಿಕವಾಗಿ ಬಳಸಿ ಉತ್ತಮ ಗುಣಮಟ್ಟದ ಕಾಂಪೋಸ್ಟ್ ತಯಾರಿಕೆಯನ್ನು ಮಾಡಿ, ಈ ಗೊಬ್ಬರವನ್ನು ಮತ್ತೆ ನಮ್ಮ ಜಮೀನಿಗೆ ಮರುಬಳಕೆ ಆಗುವಂತೆ ಅಳವಡಿಸಿಕೊಂಡೆ. ನಮ್ಮಲ್ಲೇ ಉತ್ಪತ್ತಿಯಾಗುವ ಎಲ್ಲಾ ಸೊಪ್ಪು, ತರಕಾರಿ, ಅಣಬೆ, ಕೋಳಿ, ಕುರಿ, ಜೇನು, ಅಜೋಲ, ಕಾಂಪೋಸ್ಟ್ ಎಲ್ಲವನ್ನೂ ರಿಲಯನ್ಸ್ ರಿಟೇಲ್ ಲಿಮಿಟೆಡ್ ನಲ್ಲಿ ಮತ್ತು ಆನ್‌ಲೈನ್ ಮುಖಾಂತರ ನೇರ ಮಾರುಕಟ್ಟೆಯನ್ನು ಪ್ರಾರಂಭಿಸಿದೆ. ಇದರಿಂದ ನನ್ನ ಬೇಸಾಯದಲ್ಲಿ ಖರ್ಚು ಕಡಿಮೆಯಾಗಿ, ಒಂದರಿಂದ ಒಂದು ಪೂರಕವಾಗಿ, ನಮ್ಮ ಆದಾಯ ಗಣನೀಯವಾಗಿ ಏರತೊಡಗಿತ್ತು. ಇದನ್ನು ನಾನು ಸಾಮಾಜಿಕ ಜಾಲತಾಣದ ಮುಖಾಂತರ ನಮ್ಮ ಖುಷಿಗಾಗಿ ಸಾರ್ವಜನಿಕವಾಗಿ ವಿಡಿಯೋ ಮುಖಾಂತರ ಹಂಚಿಕೊಂಡೆ. ಇದನ್ನು ಜಿಲ್ಲೆ, ರಾಜ್ಯ ಹಾಗೂ ಹೊರದೇಶಗಳಿಂದಲೂ ನೋಡಿ, ಅವರು ಸಹ ನಮ್ಮ ತೋಟಕ್ಕೆ ಭೇಟಿ ನೀಡಿ ನಮ್ಮ ಮಾರ್ಗದರ್ಶನದಲ್ಲಿ ಅವರ ಜಮೀನಿನಲ್ಲಿ ಅಳವಡಿಸಿಕೊಳ್ಳತೊಡಗಿದರು. ಹೀಗೆ ವರ್ಷದಿಂದ ವರ್ಷಕ್ಕೆ ನಮ್ಮ ಕೃಷಿಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡುತ್ತಾ, ನಮ್ಮ ಚಿಕ್ಕ ಜಮೀನಿನಲ್ಲೇ ಒಂದು 'ಮಿನಿ ಕೃಷಿ ವಿಶ್ವವಿದ್ಯಾನಿಲಯ'ದಂತೆ ನನ್ನ ಅನುಕೂಲಕ್ಕೆ ತಕ್ಕಂತೆ ನಿರ್ಮಾಣವಾಗಿತ್ತು.

"ಕೃಷಿಯಲ್ಲಿ ತ್ಯಾಜ್ಯ ಎಂಬ ಮಾತೇ ಇಲ್ಲ; ಒಂದರ ತ್ಯಾಜ್ಯವೇ ಇನ್ನೊಂದರ ಜೀವಪೋಷಕ ಅಮೃತ."
Part IV • Practical Technology & Video Masterclass

Scientific Mushroom Cultivation & Live Blueprint

From straw selection to scientific pad & fan evaporative cooling chamber construction — Dr. Santhosh Thimmegowda's complete hands-on protocol.

Paddy Straw Selection Demonstration by Dr. Santhosh Raw Material Selection
01

Selection of Quality Paddy Straw

Choosing disease-free, well-matured, unrotted golden paddy straw. High-quality dry straw ensures rapid mycelial run, zero fungal contamination, and bumper harvest.

Mechanical Chaff Cutting with Dr. Santhosh Chopping & Water Soaking
02

Straw Chopping & Water Soaking

Chopping straw into 1–2 inch bits using a chaff cutter machine, followed by soaking in clean water to achieve optimum 65–70% moisture content for bed laying.

Low Cost Traditional Growing Room Low-Cost Setup
03

Simple Low-Cost Room Construction

Economical, accessible mushroom room construction using bamboo poles, green shade netting, and gunny cloth to sustain essential coolness and humidity on a shoestring budget.

Scientific Pad & Fan Mushroom Facility Hi-Tech Climate Control
04

Scientific Pad & Fan Climate Chamber

High-tech automated cultivation room fitted with cellulose evaporative cooling pads and heavy-duty exhaust fans, sustaining 22–26°C and 85–90% humidity all year round.

ಅಣಬೆ ಬೇಸಾಯ ಕೃಷಿ ಚಕ್ರ - Mushroom Cultivation Recycling Zero Waste Circular Economy by Dr. Santhosh Thimmegowda
🔍 ಕ್ಲಿಕ್ ಮಾಡಿ ಪೂರ್ಣ ಚಿತ್ರವನ್ನು ವೀಕ್ಷಿಸಿ / Click to inspect in Full HD
ಶೂನ್ಯ ತ್ಯಾಜ್ಯ ಮರುಬಳಕೆ ಮಾದರಿ

ಅಣಬೆ ಬೇಸಾಯ ಕೃಷಿ ಚಕ್ರ — Mushroom Cultivation Recycling

ಭತ್ತದ ಬೆಳೆ ➔ ಒಣ ತ್ಯಾಜ್ಯ ಹುಲ್ಲು ➔ ಅಣಬೆ ಬೀಜ ಬಿತ್ತನೆ ➔ ಅಣಬೆ ಕಟಾವು ➔ ನೇರ ಮಾರಾಟ ➔ ಮೌಲ್ಯವರ್ಧನೆ ➔ ತ್ಯಾಜ್ಯವನ್ನು ಪ್ರಾಣಿ-ಪಕ್ಷಿಗಳಿಗೆ ಆಹಾರ ➔ ಕಾಂಪೋಸ್ಟ್ ಗೊಬ್ಬರ ತಯಾರಿ ➔ ವರ್ಮಿ ಕಾಂಪೋಸ್ಟ್ ಮಣ್ಣಿಗೆ ಮರುಬಳಕೆ.

🌾
೧. ಭತ್ತದ ಬೆಳೆ & ಒಣ ತ್ಯಾಜ್ಯ ಹುಲ್ಲು: ಹೊಲದಲ್ಲಿ ಬೆಳೆದ ಭತ್ತದ ಕಟಾವಿನ ನಂತರ ಉಳಿಯುವ ಒಣ ಹುಲ್ಲಿನ ಸದ್ಬಳಕೆ.
🍄
೨. ಬಿತ್ತನೆ, ಕಟಾವು & ಮೌಲ್ಯವರ್ಧನೆ: ಶುದ್ಧ ಸಾವಯವ ಅಣಬೆ ಕಟಾವು ಮಾಡಿ ರಿಲಯನ್ಸ್ ಮತ್ತು ಆನ್‌ಲೈನ್ ಮೂಲಕ ನೇರ ಮಾರಾಟ.
🐑
೩. ಪಶು-ಪಕ್ಷಿ ಆಹಾರ & ಸಾವಯವ ಕಾಂಪೋಸ್ಟ್: ಅಣಬೆ ಕಟಾವಿನ ನಂತರದ ತೇವದ ಹುಲ್ಲು ಕುರಿ, ಕೋಳಿಗಳಿಗೆ ಪೌಷ್ಟಿಕ ಆಹಾರ; ನಂತರ ಉತ್ಕೃಷ್ಟ ವರ್ಮಿ ಕಾಂಪೋಸ್ಟ್ ಆಗಿ ಮಣ್ಣಿಗೆ ಮರುಪೂರಣ!
♻️
೪. ಸಮಗ್ರ ಕೃಷಿ, ಶೂನ್ಯ ತ್ಯಾಜ್ಯ ಮರುಬಳಕೆ & ಮಣ್ಣಿನ ಆರೋಗ್ಯ: ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು, ಕೃಷಿ ಅಧಿಕಾರಿ ವಿಜ್ಞಾನಿಗಳು ಮತ್ತು ಒಡಿಪಿ ಸಂಸ್ಥೆಯ ಮಾರ್ಗದರ್ಶನದಲ್ಲಿ, ವೈಜ್ಞಾನಿಕವಾಗಿ ತರಬೇತಿ ಪಡೆದು ಅಣಬೆ ಕುರಿ ಕೋಳಿ ಜೇನು ಅಜೋಲ ವರ್ಮಿ ಕಾಂಪೋಸ್ಟ್, ಒಂದೇ ಸೂರಿನಡಿ ನಮ್ಮ ಅನುಕೂಲಕ್ಕೆ ತಕ್ಕಂತೆ ಎಲ್ಲಾ ಉತ್ಪನ್ನಗಳನ್ನು, ಮೌಲ್ಯವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಯನ್ನು ಕಂಡುಕೊಂಡಿರುತ್ತೇವೆ. ಭವಿಷ್ಯದ ಮಣ್ಣಿನ ಆರೋಗ್ಯ ಮತ್ತು ಮಾನವನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಕೃಷಿ ಮೂಲದಿಂದ ಬರುವ ಎಲ್ಲಾ ತ್ಯಾಜ್ಯಗಳನ್ನು, ಪ್ಲಾಸ್ಟಿಕ್ ಬೇರ್ಪಡಿಸಿ ಒಂದರಿಂದ ಮತ್ತೊಂದಕ್ಕೆ ಪೂರಕವಾಗುವ ಹಾಗೆ ಪರಿಸರಕ್ಕೆ ಹಾನಿಯಾಗದಂತೆ ರಿಸೈಕ್ಲಿಂಗ್ ಪ್ಲಾನಿಂಗ್ ಮಾಡಿ, ಮತ್ತೆ ಮಣ್ಣಿಗೆ ಸೇರಿಸಿದ್ದೇವೆ.
ದೂರದರ್ಶನ ವಿಶೇಷ ವರದಿ • 10TV Kannada News
⏱️ 9:36 Min Broadcast

೧೦ ಟಿವಿ ನ್ಯೂಸ್ ವಿಶೇಷ ವರದಿ: ಡಾ. ಸಂತೋಷ್ ತಿಮ್ಮೇಗೌಡರ ಕೃಷಿ ಕ್ರಾಂತಿ & ಸಂದರ್ಶನ

ಡಾ. ಸಂತೋಷ್ ತಿಮ್ಮೇಗೌಡ ಅವರ ತೋಟದಲ್ಲಿ ನಡೆದ ಸಮಗ್ರ ಕೃಷಿ, ಅಣಬೆ ಬೇಸಾಯ ಮತ್ತು ನೇರ ಮಾರುಕಟ್ಟೆ ಕ್ರಾಂತಿಯ ಅಧಿಕೃತ ಟೆಲಿವಿಷನ್ ವರದಿ ಮತ್ತು ನೇರ ಸಂದರ್ಶನ ವೀಕ್ಷಿಸಿ.

📥 ವಿಡಿಯೋ ಡೌನ್‌ಲೋಡ್
ಮಾಧ್ಯಮ ಮನ್ನಣೆ ಮತ್ತು ಪತ್ರಿಕಾ ವರದಿಗಳು

ಪ್ರಮುಖ ರಾಜ್ಯ ಪತ್ರಿಕೆಗಳಲ್ಲಿ ಪ್ರಕಟವಾದ ವಿಶೇಷ ವರದಿಗಳು

ಡಾ. ಸಂತೋಷ್ ತಿಮ್ಮೇಗೌಡರ ಕೃಷಿ ಸಾಧನೆ ಮತ್ತು ರೈತರಿಗೆ ನೀಡಿದ ತರಬೇತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ನಾಡಿನ ಪ್ರಮುಖ ದಿನಪತ್ರಿಕೆಗಳು.

ಪ್ರಜಾವಾಣಿ ವಿಶೇಷ ವರದಿ - ವೈಜ್ಞಾನಿಕ ಕೃಷಿ; ಯಶಸ್ವಿಯಾದ ಸಂತೋಷ
ಪ್ರಜಾವಾಣಿ • Prajavani Daily

ಪ್ರಜಾವಾಣಿ: ವೈಜ್ಞಾನಿಕ ಕೃಷಿ; ಯಶಸ್ವಿಯಾದ ಸಂತೋಷ

ಉಲ್ಲಾಸ್ ಯು.ವಿ. ಅವರ ವಿಶೇಷ ತನಿಖಾ ವರದಿ: ಸಾವಯವ ಅಣಬೆಗೆ ಬಲು ಬೇಡಿಕೆ, ಶೂನ್ಯ ಬಂಡವಾಳ ಕೃಷಿಯಲ್ಲಿ ಯಶಸ್ಸು, ತೆಂಗಿನ ಸಸಿಗಳ ನಡುವೆ ತರಕಾರಿ ಮತ್ತು ನೇರ ಮಾರುಕಟ್ಟೆ.

ಕನ್ನಡಪ್ರಭ ವಿಶೇಷ ವರದಿ - ಸಂತೋಷ್‌ಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ
ಕನ್ನಡಪ್ರಭ • Kannada Prabha

ಕನ್ನಡಪ್ರಭ: ಸಂತೋಷ್‌ಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ

ನೈಸರ್ಗಿಕ ತ್ಯಾಜ್ಯದಿಂದ ಬಂಜರು ಭೂಮಿಯಲ್ಲೂ ಲಕ್ಷಗಟ್ಟಲೆ ಆದಾಯ ಗಳಿಸಿ ಮಾದರಿಯಾದ ಯುವ ಕೃಷಿಕ ಸಂತೋಷ್‌ಗೆ ಕೃಷಿ ಇಲಾಖೆಯಿಂದ ಲಭಿಸಿದ ಜಿಲ್ಲಾ ಪ್ರಶಸ್ತಿ ವರದಿ.

ವಿಜಯವಾಣಿ ವಿಶೇಷ ವರದಿ - ನೇಗಿಲ ಯೋಗಿ: ಅಣಬೆ ಬೇಸಾಯದಲ್ಲಿ ಯುವ ರೈತ ಯಶಸ್ಸು
ವಿಜಯವಾಣಿ • Vijayavani Daily

ವಿಜಯವಾಣಿ: 'ನೇಗಿಲ ಯೋಗಿ' ಅಣಬೆ ಬೇಸಾಯದಲ್ಲಿ ಯುವ ರೈತ ಯಶಸ್ಸು

ವಿಜಯವಾಣಿ ದಿಗ್ವಿಜಯ 24x7 ಕೃಷಿ ಮೇಳ ವಿಶೇಷ: ತಾಯಿಯ ಅಗಲಿಕೆ ನಂತರ ಛಲದಿಂದ ಮುನ್ನುಗ್ಗಿ ಅಣಬೆ ಬೇಸಾಯದಲ್ಲಿ ಸಾಧನೆಗೈದ ಯಶೋಗಾಥೆ.

Reliance Direct Retail Packing & Pink Oysters Harvest
ರಿಲಯನ್ಸ್ ನೇರ ಮಾರುಕಟ್ಟೆ • Retail Direct

ಉತ್ತಮ ಗುಣಮಟ್ಟದ ಪ್ಯಾಕಿಂಗ್ & ನೇರ ಗ್ರಾಹಕ ಮಾರುಕಟ್ಟೆ

ಮಧ್ಯವರ್ತಿಗಳ ಕಾಟವಿಲ್ಲದೆ ತಾಜಾ ಗುಲಾಬಿ ಹಾಗೂ ಚಿಪ್ಪಣಬೆಗಳನ್ನು ರಿಲಯನ್ಸ್ ರೀಟೇಲ್ ಮತ್ತು ಗ್ರಾಹಕರಿಗೆ ನೇರವಾಗಿ ಪೂರೈಸಿ ಗಳಿಸಿದ ಲಾಭದಾಯಕ ಮಾದರಿ.

ಅಧ್ಯಾಯ ೫ • ರಾಷ್ಟ್ರೀಯ ರುಡ್‌ಸೆಟ್‌ ಬೋಧಕರು, ರಾಜ್ಯಮಟ್ಟದ ಪ್ರಶಸ್ತಿಗಳು & ಜರ್ಮನ್ ಡಾಕ್ಟರೇಟ್

ಸಾವಿರಾರು ಯುವಕರಿಗೆ ಬದುಕು ಕಟ್ಟಿಕೊಟ್ಟ ಗುರು & ಅಂತರರಾಷ್ಟ್ರೀಯ ಡಾಕ್ಟರೇಟ್ ಗೌರವ

ಇದನ್ನೆಲ್ಲವನ್ನು ಆಲಿಸಿ ಕೃಷಿ ಅಧಿಕಾರಿ, ವಿಜ್ಞಾನಿಗಳು ಮತ್ತು ಓ.ಡಿ.ಪಿ. (ODP) ಎಂಬ ಸಂಸ್ಥೆ ನನ್ನನ್ನು ಗುರುತಿಸಿ, ರೈತರಿಗೆ ಕೃಷಿ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಲು ಮಾರ್ಗದರ್ಶನ ನೀಡಿದರು. ದಿನದಿಂದ ದಿನಕ್ಕೆ ನಮ್ಮ ಬದಲಾವಣೆಯನ್ನು ಕಂಡು, ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟ್ ನಲ್ಲಿ ಉಪನ್ಯಾಸಕನಾಗಿ ಮಾನ್ಯತೆ ಪಡೆದು, ಕಳೆದ ಮೂರು ವರ್ಷಗಳಿಂದ ರಾಜ್ಯಾದ್ಯಂತ, ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರಿಗೆ, ಮಹಿಳೆಯರಿಗೆ, ರೈತರಿಗೆ, ನಿವೃತ್ತ ಅಧಿಕಾರಿಗಳಿಗೆ, ಅಣಬೆ ಮತ್ತು ಸಮಗ್ರ ಕೃಷಿ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿಯನ್ನು ನೀಡುತ್ತಿದ್ದೇನೆ.

ನನ್ನ ಪುಣ್ಯಭೂಮಿಯಲ್ಲಿ, ನಮ್ಮ ತಂದೆ, ನನ್ನ ಪತ್ನಿ ಮತ್ತು ನನ್ನ ಮಗಳು ಎಲ್ಲರೂ ಸಂತೋಷದಿಂದ ಕೃಷಿ ಕಾಯಕದಲ್ಲಿ ತೊಡಗಿ ಕೃಷಿಯಲ್ಲಿ ಖುಷಿಯನ್ನು ಕಂಡುಕೊಂಡಿದ್ದೇವೆ. ನಮ್ಮ ಎಲ್ಲಾ ಕೃಷಿ ಚಟುವಟಿಕೆಗಳನ್ನು ಗಮನಿಸಿ, ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು, ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ 'ಕೃಷಿ ಸಾಧಕ ಪ್ರಶಸ್ತಿ'ಯನ್ನು ನೀಡುವುದರ ಜೊತೆಗೆ, ಹಲವಾರು ಸಂಘ-ಸಂಸ್ಥೆಗಳು ನೂರಾರು ವೇದಿಕೆಗಳಲ್ಲಿ ಗೌರವಿಸಿ ಸನ್ಮಾನಿಸಿವೆ. ಜೊತೆಗೆ ಜರ್ಮನ್ ಯುನಿವರ್ಸಿಟಿಯಿಂದ ನಮ್ಮ ಕೃಷಿ ಬದಲಾವಣೆಯ ಸಾಧನೆಯನ್ನು ಕಂಡು ಕೃಷಿ ವಿಭಾಗದಿಂದ ಗೌರವಾನ್ವಿತ 'ಡಾಕ್ಟರೇಟ್ ಪದವಿ' ಪುರಸ್ಕಾರವನ್ನು ಕೊಟ್ಟು ಗೌರವಿಸಿದೆ.

"ಒಬ್ಬ ವ್ಯಕ್ತಿಗೆ ಸ್ವಂತ ಕಾಲ ಮೇಲೆ ನಿಲ್ಲುವ ಕೌಶಲ್ಯ ನೀಡುವುದೇ ನಿಜವಾದ ಸೇವೆ; ಜರ್ಮನ್ ಡಾಕ್ಟರೇಟ್ ಇಡೀ ರೈತ ಸಮುದಾಯದ ಪರಿಶ್ರಮಕ್ಕೆ ಸಿಕ್ಕ ಮನ್ನಣೆ."
ಅಧ್ಯಾಯ ೬ • ಸೃಜನಶೀಲ ಹವ್ಯಾಸಗಳು, ರಾಗಿ ಕೇಕ್ ಸಂಭ್ರಮ & ನಿಸ್ವಾರ್ಥ ಸಮಾಜ ಸೇವೆ

ರಾಗಿ ಕೇಕ್, ತರಕಾರಿ ಕಲೆ, ಗಿಡ ನೆಡುವ ಸಂಕಲ್ಪ & ಸಂಕಷ್ಟದಲ್ಲಿರುವ ರೈತರಿಗೆ ಆಸರೆ

ನನ್ನ ಕೃಷಿ ಕಾಯಕದ ಜೊತೆಗೆ ಇತರ ಚಟುವಟಿಕೆಗಳು ನನ್ನ ಜೀವನದಲ್ಲಿ ಗರಿಗೆದರಿವೆ. ಸ್ಥಳೀಯವಾಗಿ ಸಿಗುವ ಹೂ-ಎಲೆಗಳಿಂದ ಸುಂದರ ಹೂಗುಚ್ಛ ತಯಾರಿಸುವುದು, ನಮ್ಮ ಹುಟ್ಟುಹಬ್ಬ ಹಾಗೂ ಕುಟುಂಬದ ಸದಸ್ಯರ ಹುಟ್ಟುಹಬ್ಬಕ್ಕೆ ರಾಗಿ ಕೇಕ್, ಕಲ್ಲಂಗಡಿ ಹಣ್ಣಿನ ಕೇಕ್, ಕೇಸರಿ ಬಾತ್ ಕೇಕ್ ತಯಾರಿಸಿ ಸಂಭ್ರಮಿಸುವುದು, ಹಣ್ಣು-ತರಕಾರಿ ಮತ್ತು ಧಾನ್ಯಗಳನ್ನು ಬಳಸಿ ಕಲಾತ್ಮಕ ಚಿತ್ರ ಬಿಡಿಸುವುದು ನನ್ನ ಪ್ರೀತಿಯ ಹವ್ಯಾಸಗಳು. ಇವೆಲ್ಲವನ್ನೂ ಸ್ಥಳೀಯವಾಗಿ ನಡೆಯುವ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಗಣ್ಯರಿಗೆ ತರಕಾರಿಗಳನ್ನು ಒಗ್ಗೂಡಿಸಿ 'ಸನ್ಮಾನಿತ ಬುಟ್ಟಿ'ಯನ್ನು ನೀಡಿ ಗೌರವಿಸುತ್ತೇವೆ.

'ಸಂತೋಷ ಸಂಭ್ರಮಕ್ಕೊಂದು ಗಿಡ' ಎಂಬಂತೆ ನಮ್ಮ ಜನ್ಮದಿನ ಹಾಗೂ ವಿಶೇಷ ದಿನಗಳಲ್ಲಿ ಸಾರ್ವಜನಿಕವಾಗಿ ಅಲ್ಲಲ್ಲೇ ಗಿಡಗಳನ್ನು ನೆಟ್ಟು ಪೋಷಿಸುವುದು, ಪರಿಸರ ಸ್ವಚ್ಛಗೊಳಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ರೈತರಿಗೆ ಅನುಕೂಲವಾಗುವ ಸಭೆ-ಸಮಾರಂಭಗಳಿಗೆ ನಾವು ಭಾಗವಹಿಸುವುದಲ್ಲದೆ ಇತರ ರೈತರನ್ನೂ ಕರೆದೊಯ್ಯುವುದು, ಬಿಡುವಿನ ಸಮಯದಲ್ಲಿ ಶಾಲೆಗಳಿಗೆ ತೆರಳಿ ಮುಖ್ಯೋಪಾಧ್ಯಾಯರ ಅನುಮತಿ ಪಡೆದು ಶಾಲಾ ಮಕ್ಕಳಲ್ಲಿ ಕೃಷಿ ಬಗ್ಗೆ ಅರಿವು ಮೂಡಿಸುವುದು, ವರ್ಷಕ್ಕೆ ಒಂದೆರಡು ಬಾರಿ ಕುಟುಂಬ ಹಾಗೂ ರೈತರೊಡನೆ ಕೃಷಿ ಪ್ರವಾಸ ಕೈಗೊಳ್ಳುವುದು, ಹಾಗೂ ಸಂಕಷ್ಟದಲ್ಲಿರುವ ರೈತರಿಗೆ ಉಚಿತವಾಗಿ ತರಬೇತಿಗಳನ್ನು ನೀಡಿ ಅವರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜ ಹಾಗೂ ಕೃಷಿ ಪರಿಕರಗಳನ್ನು ನನ್ನ ವೈಯಕ್ತಿಕ ಹಣದಿಂದಲೇ ಕೊಟ್ಟು ಸಾರ್ವಜನಿಕವಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುತ್ತಿದ್ದೇನೆ.

"ಸಂತೋಷ ಸಂಭ್ರಮಕ್ಕೊಂದು ಗಿಡ — ನೊಂದ ರೈತನಿಗೆ ಆಸರೆಯಾಗಿ, ಮಣ್ಣಿಗೂ ಮನುಷ್ಯನಿಗೂ ನಿಸ್ವಾರ್ಥ ಪ್ರೀತಿ ನೀಡುವುದೇ ಬದುಕಿನ ನಿಜವಾದ ಸಾರ್ಥಕತೆ."
ಭಾಗ ೫ • ಇತರೆ ಚಟುವಟಿಕೆಗಳು & ಬಿಡುವಿನ ಸಮಯ

ಸಾಂಪ್ರದಾಯಿಕ ಪರಂಪರೆ, ಸೃಜನಶೀಲ ಕಲೆ, ರೈತರ ಒಗ್ಗಟ್ಟು & ಪ್ರವಾಸ

ಕೃಷಿಯಷ್ಟೇ ಅಲ್ಲದೆ ಗ್ರಾಮೀಣ ಪಳೆಯುಳಿಕೆಗಳ ಸಂರಕ್ಷಣೆ, ತರಕಾರಿ-ಧಾನ್ಯ ಕಲೆ, ರೈತ ಸಂಘಟನೆ, ಗಿಡ ನೆಡುವ ಸಂಕಲ್ಪ ಮತ್ತು ಕುಟುಂಬ ಪ್ರವಾಸದ ಹೆಜ್ಜೆಗಳು.

01 ಪ್ರಾಚೀನ ಪರಂಪರೆ & ಪಳೆಯುಳಿಕೆ ಸಂರಕ್ಷಣೆ

ಸಾಂಪ್ರದಾಯಿಕ ಪಳೆಯುಳಿಕೆಗಳ ಸಂಗ್ರಹ ಮತ್ತು ಪ್ರದರ್ಶನ (೧೫೦ ವರ್ಷದ ಮರದ ಬಂಡಿ ಗಾಡಿ)

ನಮ್ಮ ಪೂರ್ವಜರ ಸಾಂಪ್ರದಾಯಿಕ ಕೃಷಿ ಪಳೆಯುಳಿಕೆಗಳು ಮತ್ತು ಗ್ರಾಮೀಣ ಪುರಾತನ ಪರಿಕರಗಳನ್ನು ಶ್ರದ್ಧೆಯಿಂದ ಸಂಗ್ರಹಿಸಿ ಸಂರಕ್ಷಿಸುವುದು ಇವರ ವಿಶಿಷ್ಟ ಹವ್ಯಾಸ. ಬರೋಬ್ಬರಿ ೧೫೦ ವರ್ಷ ಹಳೆಯ ಐತಿಹಾಸಿಕ ಮರದ ಬಂಡಿ ಗಾಡಿಯನ್ನು (Bullock Cart) ಸುಸ್ಥಿತಿಯಲ್ಲಿ ಕಾಪಾಡಿಕೊಂಡು, ಶುದ್ಧ ಹಳ್ಳಿಕಾರ್ ಬಿಳಿ ಎತ್ತುಗಳೊಂದಿಗೆ ಸಿಂಗರಿಸಿ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ನಾಡಿನ ಬೃಹತ್ ಸಭೆ-ಸಮಾರಂಭಗಳಲ್ಲಿ ಪ್ರದರ್ಶಿಸಿ ಗ್ರಾಮೀಣ ಸಂಸ್ಕೃತಿಯ ಗತವೈಭವವನ್ನು ಮರುಕಳಿಸಿದ್ದಾರೆ.

🏆
ಟೈಮ್ಸ್ ಆಫ್ ಇಂಡಿಯಾ & ರಾಜ್ಯ ಮಾಧ್ಯಮಗಳ ಮೆಚ್ಚುಗೆ ೮೭ನೇ ಸಾಹಿತ್ಯ ಸಮ್ಮೇಳನದಲ್ಲಿ 'Farmer & 150-Yr-Old Bullock Cart' ಶೀರ್ಷಿಕೆಯಲ್ಲಿ ರಾಷ್ಟ್ರೀಯ ಪತ್ರಿಕೆಗಳ ಪ್ರಶಂಸೆ.
🎥 ೧೫೦ ವರ್ಷದ ಮರದ ಬಂಡಿ ಗಾಡಿಯ ಜೀವಂತ ಸಾಕ್ಷ್ಯಚಿತ್ರ ವಿಡಿಯೋಗಳು
ಗ್ರಾಮ ಸಂಚಾರ ವಿಡಿಯೋ

ಡಾ. ಸಂತೋಷ್ ಅವರು ಕುಟುಂಬ ಸಮೇತ ೧೫೦ ವರ್ಷದ ಮರದ ಬಂಡಿ ಗಾಡಿಯಲ್ಲಿ ಹಳ್ಳಿಕಾರ್ ಎತ್ತುಗಳೊಂದಿಗೆ ಸಾಗುತ್ತಿರುವ ದೃಶ್ಯ.

ಪೂಜಾ ವಿಧಿವಿಧಾನ & ಹೆದ್ದಾರಿ ಮೆರವಣಿಗೆ

೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳುವ ಮುನ್ನ ಬಂಡಿ ಗಾಡಿಗೆ ನಡೆದ ಮಂಗಳಕರ ಪೂಜೆ ಹಾಗೂ ಹೆದ್ದಾರಿ ಮೆರವಣಿಗೆ.

02 ಸೃಜನಶೀಲ ಹಣ್ಣು-ತರಕಾರಿ ಕಲೆ & ಸನ್ಮಾನಿತ ಬುಟ್ಟಿ

ಹಣ್ಣು, ತರಕಾರಿ, ಧಾನ್ಯಗಳಿಂದ ಕಲಾತ್ಮಕ ಚಿತ್ರ & ಗಣ್ಯರಿಗೆ 'ಸನ್ಮಾನಿತ ಬುಟ್ಟಿ' ಗೌರವ

ಸ್ಥಳೀಯವಾಗಿ ಬೆಳೆದ ಕಾಳುಗಳು, ಧಾನ್ಯಗಳು, ಹಣ್ಣು ಮತ್ತು ತರಕಾರಿಗಳಿಂದ ಅದ್ಭುತ ಚಿತ್ರಗಳನ್ನು ಬಿಡಿಸುವುದು ಮತ್ತು ತರಕಾರಿ ಕೆತ್ತನೆಯ ಮೂಲಕ ಗಣ್ಯರ ಭಾವಚಿತ್ರಗಳನ್ನು ರಚಿಸುವುದು ಇವರ ಅಪೂರ್ವ ಕಲೆ. ಪ್ಲಾಸ್ಟಿಕ್ ಹೂಗುಚ್ಛ ಅಥವಾ ಶಾಲುಗಳ ಬದಲಿಗೆ, ತಮ್ಮ ತೋಟದಲ್ಲಿ ನೈಸರ್ಗಿಕವಾಗಿ ಬೆಳೆದ ತರಕಾರಿಗಳನ್ನು ಸುಂದರವಾಗಿ ಜೋಡಿಸಿ 'ಸನ್ಮಾನಿತ ಬುಟ್ಟಿ'ಯನ್ನಾಗಿ ಮಾಡಿ ಸಭೆ-ಸಮಾರಂಭಗಳಿಗೆ ಬರುವ ಗಣ್ಯರಿಗೆ ಗೌರವಪೂರ್ವಕವಾಗಿ ಅರ್ಪಿಸುವ ಪರಿಸರಸ್ನೇಹಿ ಸಂಪ್ರದಾಯವನ್ನು ಹುಟ್ಟುಹಾಕಿದ್ದಾರೆ.

🎨
ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರ ತರಕಾರಿ ಕೆತ್ತನೆ ಚಿತ್ರ ಹಣ್ಣು-ತರಕಾರಿಗಳಿಂದ ಮಾಜಿ ಪ್ರಧಾನಿಗಳ ಭಾವಚಿತ್ರ ಕೆತ್ತನೆ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಸನ್ಮಾನಿತ ಬುಟ್ಟಿ ಸಲ್ಲಿಕೆ.
03 ರೈತರ ಸಂಘಟನೆ & FPO ಕಾರ್ಯದರ್ಶಿ ಸೇವೆ

ರೈತರನ್ನು ಸಂಘಟಿಸಿ FPO ಮೂಲಕ ಉತ್ಪನ್ನಗಳ ನೇರ ಮಾರಾಟ (ಕಾರ್ಯದರ್ಶಿ ಸೇವೆ)

ರೈತ ಉತ್ಪಾದಕ ಸಂಸ್ಥೆಗಳ (FPO) ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಡಾ. ತಿಮ್ಮೇಗೌಡರು, ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಒಗ್ಗೂಡಿಸಿ ಗುಂಪುಗಳನ್ನು ರಚಿಸಿದ್ದಾರೆ. ಮಧ್ಯವರ್ತಿಗಳ ಶೋಷಣೆಯನ್ನು ಸಂಪೂರ್ಣವಾಗಿ ತಪ್ಪಿಸಿ, ರೈತರ ತಾಜಾ ಉತ್ಪನ್ನಗಳನ್ನು ನೇರವಾಗಿ ರಿಲಯನ್ಸ್ ರಿಟೇಲ್ ಹಾಗೂ ಗ್ರಾಹಕರಿಗೆ ನ್ಯಾಯಯುತ ಬೆಲೆಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಸೃಷ್ಟಿಸಿ ನೂರಾರು ರೈತ ಕುಟುಂಬಗಳ ಆರ್ಥಿಕ ಚೇತರಿಕೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

🤝
ಸಾವಯವ ಸಮಗ್ರ ತೋಟಗಾರಿಕೆ & ನೇರ ಗ್ರಾಹಕ ಮಾರುಕಟ್ಟೆ ಪಪ್ಪಾಯಿ, ತರಕಾರಿ ಮತ್ತು ಧಾನ್ಯಗಳ ತ್ರಿವರ್ಣ ಧ್ವಜ ಕಲಾ ಸಂಯೋಜನೆ ಮತ್ತು ರೈತರಿಗೆ ನ್ಯಾಯಯುತ ಲಾಭ.
Organic papaya farm & tricolor harvest celebration
🇮🇳 ಕೃಷಿ ದೇಶಭಕ್ತಿ & ಸಾವಯವ ಪಪ್ಪಾಯಿ

Top: Tricolor national flag crafted from vegetables • Bottom: Dr. Santhosh in his organic papaya farm.

04 ಹಸಿರು ಸಂಕಲ್ಪ & ಮಂಡ್ಯ ರೈತರ ರಾಯಭಾರಿ

ಸಭೆ-ಸಮಾರಂಭಗಳಲ್ಲಿ ಗಿಡಗಳನ್ನು ಉಡುಗೊರೆಯಾಗಿ ನೀಡುವುದು & 'ಸಂಭ್ರಮಕ್ಕೊಂದು ಗಿಡ' ಸಂಕಲ್ಪ

ಯಾವುದೇ ಸಭೆ, ಸಮಾರಂಭ, ಅತಿಥಿ ಸತ್ಕಾರವಿರಲಿ — ಡಾ. ತಿಮ್ಮೇಗೌಡರು ಗಿಡಗಳನ್ನು ಉಡುಗೊರೆಯಾಗಿ ನೀಡುವ ಹಸಿರು ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ. ತಮ್ಮ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಹಾಗೂ ಕುಟುಂಬದ ಪ್ರತಿಯೊಂದು ಶುಭ ಸಂದರ್ಭಗಳಲ್ಲಿ 'ಸಂತೋಷ ಸಂಭ್ರಮಕ್ಕೊಂದು ಗಿಡ' ಅಭಿಯಾನದಡಿ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಸ್ವತಃ ತಾವೇ ಪೋಷಿಸುತ್ತಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ರೈತರ ಸದಾಶಯ ಮತ್ತು ಹಿತಾಸಕ್ತಿಯನ್ನು ರಾಜ್ಯಾದ್ಯಂತ ಹೆಮ್ಮೆಯಿಂದ ಪ್ರತಿನಿಧಿಸುವ ರೈತ ರಾಯಭಾರಿಯಾಗಿ ಗುರುತಿಸಿಕೊಂಡಿದ್ದಾರೆ.

🌱
'ಸಂಭ್ರಮಕ್ಕೊಂದು ಗಿಡ' ನಿರಂತರ ಪೋಷಣೆ ವಿಶೇಷ ದಿನಗಳಲ್ಲಿ ಕೇವಲ ಗಿಡ ನೆಡುವುದಷ್ಟೇ ಅಲ್ಲದೆ, ಅವು ಹೆಮ್ಮರವಾಗುವವರೆಗೆ ಸ್ವತಃ ಪೋಷಿಸುವ ಬದ್ಧತೆ.
🏛️
ಮಂಡ್ಯ ಜಿಲ್ಲೆಯ ಹೆಮ್ಮೆಯ ರೈತ ರಾಯಭಾರಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವೇದಿಕೆಗಳಲ್ಲಿ ಮಂಡ್ಯ ಜಿಲ್ಲೆಯ ಸೃಜನಶೀಲ, ವೈಜ್ಞಾನಿಕ ರೈತರ ಧ್ವನಿಯಾಗಿ ಭಾಗಿ.
05 ನಿಸ್ವಾರ್ಥ ಕೃಷಿ ಸಹಾಯ ಹಸ್ತ

ಸಂಕಷ್ಟದಲ್ಲಿರುವ ರೈತರಿಗೆ ಮಾರ್ಗದರ್ಶನ & ಸ್ವಂತ ಖರ್ಚಿನಲ್ಲಿ ಬಿತ್ತನೆ ಬೀಜ ಮತ್ತು ಪರಿಕರಗಳ ನೆರವು

ಬೆಳೆ ನಷ್ಟ, ಸಾಲದ ಹೊರೆ ಅಥವಾ ಸೂಕ್ತ ಮಾರುಕಟ್ಟೆ ಸಿಗದೆ ಹತಾಶರಾಗಿರುವ ರೈತರಿಗೆ ಮಾನಸಿಕ ಧೈರ್ಯ ಮತ್ತು ವೈಜ್ಞಾನಿಕ ಕೃಷಿ ಮಾರ್ಗದರ್ಶನವನ್ನು ಉಚಿತವಾಗಿ ನೀಡುತ್ತಾರೆ. ಅಷ್ಟೇ ಅಲ್ಲದೆ, ತಮ್ಮ ವೈಯಕ್ತಿಕ ದುಡಿಮೆಯ ಹಣದಿಂದಲೇ ಸಂಕಷ್ಟದಲ್ಲಿರುವ ಬಡ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳು, ಅಣಬೆ ಸ್ಪಾನ್ ಕಿಟ್‌ಗಳು ಮತ್ತು ಕೃಷಿ ಪರಿಕರಗಳನ್ನು ಉಚಿತವಾಗಿ ನೀಡಿ, ಅವರು ಪುನಃ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದ್ದಾರೆ.

🤲
ಸ್ವಂತ ಖರ್ಚಿನಲ್ಲಿ ರೈತರ ಕಣ್ಣೀರು ಒರೆಸುವ ಕಾಯಕ ಉಚಿತ ತರಬೇತಿ, ಉಚಿತ ಬಿತ್ತನೆ ಬೀಜ ಹಾಗೂ ಉಪಕರಣಗಳನ್ನು ಒದಗಿಸಿ ನೊಂದ ರೈತನಿಗೆ ಬೆನ್ನೆಲುಬಾಗಿ ನಿಲ್ಲುವ ಮಾನವೀಯತೆ.
06 ವಾರ್ಷಿಕ ಕೃಷಿ ಅಧ್ಯಯನ & ಕುಟುಂಬ ವಿಮಾನ ಪ್ರವಾಸ

ವರ್ಷಕ್ಕೆ ಒಂದೆರಡು ಬಾರಿ ಕೃಷಿ ಅಧ್ಯಯನ ಮತ್ತು ಕುಟುಂಬ ವಿಮಾನ ಪ್ರವಾಸ

ಕೃಷಿಯ ನಿರಂತರ ಪರಿಶ್ರಮದ ನಡುವೆ ಮನಸ್ಸಿಗೆ ಉಲ್ಲಾಸ ಹಾಗೂ ನವೀನ ಕೃಷಿ ತಂತ್ರಜ್ಞಾನಗಳ ಪ್ರಾಯೋಗಿಕ ಜ್ಞಾನ ಪಡೆಯಲು ವರ್ಷಕ್ಕೆ ಒಂದೆರಡು ಬಾರಿ ಕುಟುಂಬ ಹಾಗೂ ಆಪ್ತ ರೈತರೊಂದಿಗೆ ಪ್ರವಾಸ ಕೈಗೊಳ್ಳುವುದು ಇವರ ವಾಡಿಕೆ. ವಿಮಾನದ ಮೂಲಕ ದೂರದ ರಾಜ್ಯಗಳ ಕೃಷಿ ಸಂಶೋಧನಾ ಕೇಂದ್ರಗಳು, ಪ್ರಸಿದ್ಧ ಐತಿಹಾಸಿಕ ತಾಣಗಳು ಹಾಗೂ ನೈಸರ್ಗಿಕ ತಾಣಗಳಿಗೆ ಭೇಟಿ ನೀಡಿ ಹೊಸ ಅನುಭವಗಳನ್ನು ಮೈಗೂಡಿಸಿಕೊಂಡು ಕೃಷಿಗೆ ಹೊಸ ಚೈತನ್ಯ ತುಂಬುತ್ತಾರೆ.

✈️
ಆಕಾಶದ ಎತ್ತರಕ್ಕೂ ಹಾರಿದ ಕೃಷಿಕನ ಕನಸು ಕುಟುಂಬದೊಂದಿಗೆ ವಿಮಾನ ಪ್ರಯಾಣ ಕೈಗೊಂಡು ಜ್ಞಾನ ವಿಸ್ತರಿಸುವ ಹಾಗೂ ಕುಟುಂಬದ ಜತೆಗೂಡಿ ಸಂಭ್ರಮಿಸುವ ಅಪರೂಪದ ಕ್ಷಣಗಳು.
Dr. Santhosh and family boarding flight on airport tarmac for annual tour
✈️ ವಾರ್ಷಿಕ ವಿಮಾನ ಪ್ರವಾಸ

Top: Boarding IndiGo aircraft with family • Bottom: Memorable family moments at airport terminal.

🎉 💚 🥰 🙏
ತುಂಬು ಹೃದಯದ ಧನ್ಯವಾದಗಳು • Heartfelt Gratitude

ಇದುವರೆಗೆ ನಮ್ಮ ಬಗ್ಗೆ ಓದಿ ವಿಷಯವನ್ನು ತಿಳಿದುಕೊಂಡ ನಿಮಗೂ ಮತ್ತು ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು

"ಇದುವರೆಗೆ ನಮ್ಮ ಬಗ್ಗೆ ಓದಿ ವಿಷಯವನ್ನು ತಿಳಿದುಕೊಂಡ ನಿಮಗೂ ಮತ್ತು ನಮ್ಮನ್ನು ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು Thank you 🎉💚 🥰 🙏"

- ಡಾ. ತಿಮ್ಮೇಗೌಡ ಎಂ.ಕೆ. (ಸಂತೋಷ್), ಕುಟುಂಬ ಮತ್ತು ಕೃಷಿ ಬಳಗ ಮರಡಿಪುರ, ನಾಗಮಂಗಲ, ಮಂಡ್ಯ ಜಿಲ್ಲೆ, ಕರ್ನಾಟಕ
ಸಂಪರ್ಕ ಮತ್ತು ಸಮಾಲೋಚನೆ

ಡಾ. ತಿಮ್ಮೇಗೌಡ ಎಂ.ಕೆ. ಅವರೊಂದಿಗೆ ಸಂಪರ್ಕಿಸಿ

ಕೃಷಿ ವಿಶ್ವವಿದ್ಯಾನಿಲಯ, ಒಡಿಪಿ ಹಾಗೂ ರುಡ್ಸೆಟಿ ತರಬೇತಿ ಕಾರ್ಯಾಗಾರಗಳು, ಅಣಬೆ ಕೃಷಿ ಮಾರ್ಗದರ್ಶನ, ಅತಿಥಿ ಉಪನ್ಯಾಸಕ್ಕಾಗಿ ನೇರವಾಗಿ ಸಂಪರ್ಕಿಸಿ.

💬
ನೇರ ವಾಟ್ಸಾಪ್ (WhatsApp) +91 94496 17670
📞
ದೂರವಾಣಿ ಸಂಪರ್ಕ +91 94496 17670
📍
ಹುಟ್ಟೂರು ಮತ್ತು ಕೇಂದ್ರ ಮರಡಿಪುರ, ನಾಗಮಂಗಲ, ಮಂಡ್ಯ / ಕರ್ನಾಟಕ

ಡಾ. ತಿಮ್ಮೇಗೌಡರಿಗೆ ಸಂದೇಶ ಕಳುಹಿಸಿ

ತರಬೇತಿ ಕಾರ್ಯಾಗಾರ, ಅತಿಥಿ ಉಪನ್ಯಾಸ ಅಥವಾ ಕೃಷಿ ಸಮಾಲೋಚನೆಗಾಗಿ ವಿವರಗಳನ್ನು ಭರ್ತಿ ಮಾಡಿ.

💬